ಫುಟ್‌ಪಾತ್ ಪ್ರಾಬ್ಲಂ 

ಶಿವಮೊಗ್ಗ :  ನಗರದ ಹಲವು ಭಾಗಗಳಲ್ಲಿ ನಿರ್ಮಿಸಿರುವ ಫುಟ್‌ಪಾತ್‌ಗಳು ಯೋಗ್ಯವಾಗಿಲ್ಲ. ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಈ ಪುಟ್‌ಪಾತ್‌ಗಳನ್ನ ನಿರ್ಮಾಣ ಮಾಡಲಾಗಿದೆ.

ಕೆಲವು ಕಡೆ ಹಿರಿದಾಗಿ ಹಾಗೂ ಇನ್ನೂ ಕೆಲವು ಕಡೆ ಕಿರಿದಾಗುತ್ತಾ ಹೋಗಿರುವ ಇವುಗಳಲ್ಲಿ ಜನರು ಒಡಾಡೊಕೆ ಮನಸ್ಸು ಮಾಡ್ತಾಯಿಲ್ಲ. ಅಲ್ಲದೆ ಅಲ್ಲಲ್ಲಿ ಫುಟ್‌ಪಾತ್ ಮದ್ಯೆದಲ್ಲಿಯೇ ಕರೆಂಟ್ ಕಂಬಗಳು ಹಾಗೂ ಟ್ರಾನ್ಸ್‌ಪ್ರಾಮರ್‌ಗಳನ್ನ ಹಾಕಿರುವುದರಿಂದ ಜನರು ಹೆದರಿಕೆಯಿಂದ ಈ ಫುಟ್‌ಪಾತ್ ಸಹವಾಸವೇ ಬೇಡವೆಂದು ರಸ್ತೆಯಲ್ಲಿ ಓಡಾಡುತ್ತಿದ್ದಾರೆ.  ಅವೈಜ್ಞಾನಿಕವಾಗಿ ಈ ರೀತಿ ಶಿವಮೊಗ್ಗ ನಗರದ ಬಹುತೇಕ ಕಡೆ ಕಾಮಗಾರಿ ನಡೆಸ್ತಾ ಇರೋದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸ್ತಾ ಇದಾರೆ.