ಶಿವಮೊಗ್ಗ : ರಾಗಿಗುಡ್ಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಣ ಹುಲ್ಲು ಬೆಳೆದಿದ್ದರಿಂದ ಬೆಂಕಿ ವೇಗವಾಗಿ ಒಂದು ಕಡೆಯಿಂದ ವಿಶಾಲ ಪ್ರದೇಶದಲ್ಲಿ ವಿಸ್ತರಿಸಿದೆ.
ದಟ್ಟ ಪ್ರಮಾಣದ ಹೊಗೆ ಸುತ್ತಲು ಆವರಿಸಿದೆ. ಬೆಂಕಿಯನ್ನು ನಂದಿಸುವ ಕಾರ್ಯ ನಡೆಯುತ್ತಿದೆ. ಬೆಂಕೆ ಹತ್ತಿಕೊಳ್ಳಲು ನಿಖರ ಕಾರಣ ಏನು ಎಂದು ಇನ್ನೂ ತಿಳಿದು ಬಂದಿಲ್ಲ.