ಬೃಹತ್ ರೈತ ಸಮಾವೇಶ

ಶಿವಮೊಗ್ಗ : ಜುಲೈ 21 ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ರೈತ ಸಂಘದ ನೂತನ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಜುಲೈ 21ಕ್ಕೆ ನರಗುಂದ ಹಾಗೂ ನವಲಗುಂದ ರೈತರ ಮೇಲೆ ನಡೆದ ಅಮಾನುಷ ದೌರ್ಜನ್ಯಕ್ಕೆ ೪೨ ವರ್ಷಗಳಾಗಲಿವೆ.

ಹೀಗಾಗಿ ಈ ದಿನವನ್ನು ಹುತಾತ್ಮರ ದಿನಾಚರಣೆ ಹೆಸರಿನಲ್ಲಿ ಆಚರಿಸಲಾಗುವುದು. ಹಾಗೇನೆ ರೈತರ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಈ ಸಮಾವೇಶದಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.