ಅರ್ಥ ಸಚಿವರಾಗಿದ್ದ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು : ಕೆಎಸ್‌ಈ

ಶಿವಮೊಗ್ಗ : ಸಿದ್ದರಾಮಯ್ಯು ಮುಖ್ಯಮಂತ್ರಿಯಾಗಿದ್ದಾಗ ವಜ್ರ, ವೈಡೂರ್‍ಯಗಳನ್ನ ರಸ್ತೆಯಲ್ಲಿ ಮಾರಾಟ ಮಾಡ್ತಾಯಿದ್ದರು. ಯಾರು ಮನೆಗೆ ಬೀಗಾನು ಹಾಕ್ತಾ ಇರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ವಿಜಯ ನಗರ ಸಾಮ್ರಾಜ್ಯವಾಗಿತ್ತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಸಾಲದಲ್ಲಿ ಮುಳುಗಿ ಸಾಲದಲ್ಲಿ ಏಳ್ತಾಯಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಂದು ರೂಪಾಯಿ ಸಾಲ ಮಾಡಿಲ್ಲ ಎಂದು ಬಹಿರಂಗವಾಗಿ ಹೇಳಲಿ. ಸರ್ಕಾರ ಎಂದ ಮೇಲೆ ಸಾಲ ಮಾಡೋದು ಇರುತ್ತೆ. ಸಾಲ ತೀರಿಸೋದು ಇರುತ್ತೆ. ಅರ್ಥ ಸಚಿವರಾಗಿದ್ದ ಸಿದ್ದರಾಮಯ್ಯ ಇದನ್ನ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.