ಕೆ.ಎಸ್.ಈ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು 

ಶಿವಮೊಗ್ಗ : ಒಂದೆಡೆ ಸಂತೋಶ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ವಿಪಕ್ಷಗಳು ಪಟ್ಟುಹಿಡಿದೆ. ಮತ್ತೊಂದೆಡೆ ಈಶ್ವರಪ್ಪ ಸಚಿವ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಜಿಲ್ಲಾಧಿಕಾರಿ ಆವರಣದಲ್ಲಿ ರಾಷ್ಟ್ರಭಕ್ತ ಬಳಗ ಪ್ರತಿಭಟನೆ ನಡೆಸಿದೆ.

ಈಶ್ವರಪ್ಪ ಜನಪ್ರೀಯತೆಯನ್ನು ವಿಪಕ್ಷಗಳಿಗೆ ಸಹಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಸಹಿಕೊಳ್ಳಲಾಗದ ಕಾಂಗ್ರೆಸ್, ಜೆಡಿಎಸ್ ಹಾಗೂ ಎಸ್‌ಡಿಪಿಐ ಸಂಘಟನೆಗಳು ಈಶ್ವರಪ್ಪ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಂತೋಶ್ ಪಾಟೀಲ್ ಆರೋಪವನ್ನು ಸಚಿವರು ಬಹಿರಂಗವಾಗಿ ಅಲ್ಲಗಳೆದಿದ್ದರು. ಜೊತೆಗೆ ಆತನ ವಿರುದ್ಧ ಮಾನನಷ್ಟ ಮೊಕ್ಕದಮ್ಮೆಯನ್ನು ಕೂಡ ದಾಖಲಿಸಿದ್ದರು.

ಸಂತೋಷ್ ಆತ್ಮಹತ್ಯೆಯಿಂದಾಗಿ ಸಚಿವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಅಂತಯೇ ನಾನು ಯಾವ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಮಾಧ್ಯಮಗೋಷ್ಟಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.