ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ ಕೆಎಸ್‌ಈ 

ಶಿವಮೊಗ್ಗ : ಸಚಿವ ಕೆ.ಎಸ್.ಈಶ್ವರಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಗುರುವಾರ ಸಂಜೆ ಗೋಪಾಳದ ವಿದ್ಯಾನಿಕೇತನ ಶಾಲೆಯ ಬಳಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ವೆಂಕಟೇಶ್‌ನ ಆರೋಗ್ಯ ವಿಚಾರಿಸಿದ್ದಾರೆ. ಗಾಯಳುವಿನ ಬಳಿ ಘಟನೆ ಹೇಗಾಯಿತು?, ಎಷ್ಟು ಜನರಿದ್ದರು?, ಈಗ ಆರೋಗ್ಯ ಹೇಗಿದೆ ಎಂದು ಮಾಹಿತಿ ಮಾಹಿತಿ ಪಡೆದುಕೊಂಡರು. ವೈದ್ಯರ ಬಳಿಯೂ ವೆಂಕಟೇಶ್‌ನ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.

ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆಲ ಗೂಂಡಗಳು ಮಾಡುತ್ತಿರುವ ಇಂತಹ ದುಷ್ಕೃತ್ಯಗಳಿಂದ ಇಡೀ ಮುಸ್ಲಿಂ ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ. ಹಿಂದೂ ಸಮಾಜಕ್ಕೂ ಒಂದು ತಾಳ್ಮೆ ಇರುತ್ತದೆ. ನಾನೊಬ್ಬ ಮಂತ್ರಿಯಾಗಿ ಎಷ್ಟು ಸಾಧ್ಯವೋ ಅಷ್ಟು ಶಾಂತಿ ಕಾಪಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.