ಹರ್ಷ ಕುಟುಂಬಕ್ಕೆ 10 ಲಕ್ಷ ಚೆಕ್ ನೀಡಿದ ಕೆಎಸ್‌ಈ ಕುಟುಂಬ 

ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಈಶ್ವರಪ್ಪ ಪತ್ನಿ ಜಯಲಕ್ಷ್ಮೀ, ಪುತ್ರ ಕಾಂತೇಶ್ ಹರ್ಷ ಪೋಷಕರನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ. ಹಾಗೂ ಹರ್ಷ ಆತ್ಮಕ್ಕೆ ಶಾಂತಿ ಸಿಗಲೆಂದು ಜಯಲಕ್ಷ್ಮೀ ಅವರು ಹರ್ಷ ಕುಟುಂಬಕ್ಕೆ 10 ಲಕ್ಷ ಚೆಕ್ ನೀಡುವ ಮೂಲಕ ಆರ್ಥಿಕ ನೆರವು ನೀಡಿದ್ದಾರೆ.