ಶಿವಮೊಗ್ಗ : ಮುಂಬರುವ ವಿಧಾನಸಭೆ ಚುನಾವಣೆಗೆ ಆಮ್‌ಆದ್ಮಿ ಪಾರ್ಟಿ ಭರ್ಜರಿ ತಯಾರಿ ಮಾಡಿಕೊಳ್ತಾಯಿದೆ. ಈಗಾಗಲೇ ಹಲವು ಪ್ರಮುಖರು ಆಪ್ ಸೇರ್ಪಡೆಗೊಳ್ಳುತ್ತಿದ್ದಾರೆ. ಇದೀಗ ಈ ಸಾಲಿಗೆ ಶಿವಮೊಗ್ಗದ ಎನ್. ಏಳು ಮಲೈ ಸೇರಿಕೊಂಡಿದ್ದಾರೆ.
ಹೌದು ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾಗಿದ್ದ ಎನ್. ಏಳುಮಲೈ ಜೆಡಿಎಸ್ ತ್ಯಜಿಸಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗುರುವಾರ ಬೆಂಗಳೂರಿನ ಸಿಟಿ ಸೆಂಟರ್ ಹಾಲ್‌ನಲ್ಲಿ ನಡೆದ ಆಪ್ ಪಕ್ಷದ ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ನಾಯಕ ಪೃಥ್ವಿರೆಡ್ಡಿ, ಪಕ್ಷದ ದೆಹಲಿ ಮುಖಂಡ ದಿಲೀಪ್ ಪಾಂಡೆ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಆಮ್‌ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.