ಕಣ್ಮುಚ್ಚಿ ಕುಳಿತಿರುವ ಅರಣ್ಯ ಇಲಾಖೆ  

ಆಯನೂರು : ಆಯನೂರು ಸಮೀಪದ ಚೆನ್ನಹಳ್ಳಿಯಲ್ಲಿ ನಿತ್ಯವೂ ಕಾಡಾನೆಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡಿ, ರೈತರ ಬೆಳೆಗಳಿಗೆ ಹಾನಿ ಮಾಡ್ತಾಯಿವೆ. ರಾತ್ರಿಯಾದರೇ ಸಾಕು ಹಿಂಡು, ಹಿಂಡಾಗಿ ಬರ್‍ತಾಯಿರುವ ಈ ಆನೆಗಳು ರಾತ್ರಿಯಿಡೀ ತೋಟಗಳಲ್ಲಿಯೇ ಉಳಿದುಕೊಳ್ಳುತ್ತಿವೆ. ಅಡಿಕೆ ಹಾಗೂ ಬಾಳೆಗಿಡಗಳಿಗೆ ಆನೆಗಳು ಹಾನಿ ಮಾಡಿವೆ.

ಕೆಲ ದಿನಗಳ ಹಿಂದೆಯಷ್ಟೆ ಈ ಆನೆಗಳು ರೈತರ ಕಬ್ಬು ಹಾಗೂ ಭತ್ತದ ಬೆಳೆಗಳಿಗೂ ಹಾನಿ ಮಾಡಿದ್ದವು. ಅರಣ್ಯ ಇಲಾಖೆಯವರು ಕಾಡು ಹಾಗೂ ರೈತರ ಜಮೀನಿನ ನಡುವೆ ದೊಡ್ಡದಾದ ಟ್ರಂಚ್‌ಗಳನ್ನ ಹೊಡೆದಿದ್ದಾರೆ. ಆದ್ರೆ ಈ ಆನೆಗಳ ಹಿಂಡು ಆ ಟ್ರಂಚ್‌ಗಳನ್ನ ಸರಾಗವಾಗಿ ದಾಟಿ ಬರ್‍ತಾಯಿವೆ. ಆನೆಗಳ ಈ ದಾಳಿಯಿಂದಾಗಿ ರೈತರು ತಮ್ಮ ತೋಟಗಳಿಗೆ ನೀರು ಬಿಡಲು ಹೋಗಲು ಸಹ ಹೆದರುವಂತಾಗಿದೆ.

ಅರಣ್ಯ ಇಲಾಖೆಯವರು ಬಂದು ಆನೆಗಳನ್ನ ಓಡಿಸುತ್ತಾರೆ. ಆದ್ರೆ ಬೇರೊಬ್ಬ ರೈತಮ ಜಮೀನಿನಲ್ಲಿ ಈ ಆನೆಗಳು ಮತ್ತೆ ಪ್ರತ್ಯಕ್ಷವಾಗುತ್ತಿವೆ. ನಿತ್ಯವೂ ಆನೆಗಳ ದಾಳಿಯಿಂದ ಬೇಸತ್ತಿರುವ ರೈತರು, ಈ ಸಮಸ್ಯೆಗೆ ನಮಗೆ ಶಾಶ್ವತವಾದ ಪರಿಹಾರ ಬೇಕೆಂದು ಆಗ್ರಹಿಸುತ್ತಿದ್ದಾರೆ.