ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ

ಬೆಂಗಳೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ ಏರಿಕೆ ಸರದಿ. ರಾಜ್ಯದಲ್ಲಿ ಜುಲೈ ೧ ರಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ. ಹೌದು, ಬೆಲೆ ಏರಿಕೆ ಬಿಸಿ ನಡುವೆ ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ.

ಜುಲೈ ೧ ರಿಂದ ವಿದ್ಯುತ್ ದರ ೧೯ ರೂಪಾಯಿಯಿಂದ ೩೧ ರವರೆಗೆ ಹೆಚ್ಚಾಗಲಿದೆ. ಪ್ರತಿ ತಿಂಗಳು ೧೦೦ ಯೂನಿಟ್ ಬಳಸುವ ಗ್ರಾಹಕರು, ಇನ್ಮುಂದೆ ಹೆಚ್ಚುವರಿಯಾಗಿ ೧೯ ರೂಪಾಯಿಂದ ೩೧ ರೂಪಾಯಿ ಪಾವತಿಸಬೇಕು.

ಕಳೆದ ೨ ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ ದರ ಏರಿಕೆ ಮಾಡಲಾಗಿದೆ. ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗಿದೆ ಹಾಗೂ ಎಸ್ಕಾಂಗಳು ಆರ್ಥಿಕವಾಗಿ ನಷ್ಟದಲ್ಲಿರುವ ಕಾರಣ ದರ ಏರಿಕೆ ಮಾಡಲಾಗಿದೆ.