ಭದ್ರಾವತಿಯ ಮುನೀರ್ ಬಾಷಾಗೆ ಏಕಲವ್ಯ ಪ್ರಶಸ್ತಿ

ಭದ್ರಾವತಿ : ಅಂತರಾಷ್ಟ್ರಿಯ ಕೊಕ್ಕೊ ಕ್ರೀಡಾಪಟು ಮುನೀರ್ ಬಾಷಾಗೆ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ ಲಭಿಸಿದೆ. ಇವರು ಭಾರತ ಕೊಕ್ಕೋ ತಂಡದ ಉಪನಾಯಕನಾಗಿ ಎರಡು ಬಾರಿ ಸೌತ್ ಏಷ್ಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದಿದ್ದಾರೆ.

ಪ್ರೈಮರಿ ಶಾಲಾ ಹಂತದಿಂದಲೇ ಕೊಕ್ಕೊ ಆಸಕ್ತಿ ಬೆಳೆಸಿಕೊಂಡಿದ್ದ ಮುನೀರ್, ಬಡತನದ ನಡುವೆಯೂ ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದವರು. ೩೩ನೇ ವಯಸ್ಸಿನಲ್ಲಿಯೂ ಕೊಕ್ಕೊದಲ್ಲಿ ಆಸಕ್ತಿ ಉಳಿಸಿಕೊಳ್ಳುವ ಜೊತೆಗೆ, ಜೀವನೋಪಾಯಕ್ಕಾಗಿ ಮರದ ಕೆತ್ತನೆ ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯ ಪ್ರಶಸ್ತಿ ಗರಿಯ ಜತೆಗೆ ಕೆಲಸದ ನಿರೀಕ್ಷೆಯಲ್ಲಿ ತಮ್ಮ ನೆಚ್ಚನ ಕ್ರೀಡೆಯಲ್ಲಿ ಮಗ್ನರಾಗಿದ್ದಾರೆ.