ಶಿವಮೊಗ್ಗ : ಗ್ರಾಮ ಪಂಚಾಯತ್ ಸದಸ್ಯರ ಗೌರವಧನವನ್ನು ಶೀಘ್ರದಲ್ಲಿಯೇ ಹೆಚ್ಚಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದ್ರು. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪರಿಷತ್ ಚುನಾವಣೆಗೆ ನಾಮಪತ್ರಲ್ಲಿಸುವ ಮೂರು ದಿನ ಮೊದಲೇ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಗಿಗೂ ಬೆಂಬಲ ಬೆಲೆ ನಿಗದಿ ಪಡಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಹಿಂದುಳಿದ ವರ್ಗಗಳ ವಸತಿ ಯೋಜನೆಯಲ್ಲಿ ಮನೆ ಹಂಚಿಕೆ ಮಾಡಲು ಜಿಲ್ಲೆಯಲ್ಲಿ ಜಿಪಿಎಸ್ ಸಮಸ್ಯೆ ಇದೆ. ಪಿಡಿಒಗಳನ್ನು ಮೂರು ವರ್ಷ ಒಂದೇ ಗ್ರಾಮ ಪಂಚಾಯತಿಯಲ್ಲಿ ಇರುವಂತಿಲ್ಲ ಎಂದು ಸೂಚಿಸಿದ್ದೇನೆ. ಹಾಗೇನೆ ರದ್ದಾಗಿರುವ ವಿದ್ಯಾರ್ಥಿ ವೇತನವನ್ನು ಪುನರಾರಂಭಿಸಲು ಸರ್ಕಾರವನ್ನು ಒತ್ತಾಯಿಸುವೆ. ಹೀಗೆ ಅನೇಕ ವಿಚಾರಗಳ ಮಾಹಿತಿಯನ್ನು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಡ್ರು.
ಜಿಎಸ್‌ಟಿ ತೆರಿಗೆ ಹಣವನ್ನು ಮತ್ತೆ ಜನರಿಗೆ ನೀಡಲಾಗುವುದು
ಜಿಎಸ್‌ಟಿ ಮೂಲಕ ಸಂಗ್ರಹಿಸಿದ ಹಣವನ್ನು ಮತ್ತೆ ಜನರಿಗೇ ನೀಡಲಾಗುವುದು. ನಮ್ಮ ನೆರೆಯ ರಾಷ್ಟçಗಳ ಪರಿಸ್ಥಿಯನ್ನು ಗಮನಿಸಿದ್ರೆ ಈ ರೀತಿಯ ಕ್ರಮ ಸರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದ್ರು. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ತಿಂಗಳು ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್ ನಡೆಯುತ್ತಿದೆ. ಈ ಸಭೆಯಲ್ಲಿ ಯಾವ ವಸ್ತಗಳು ಮೇಲಿನ ತೆರಿಗೆಯನ್ನು ಕಡಿಮೆ ಮಾಡ್ಬೇಕು. ಯಾವುದನ್ನು ಜಾಸ್ತಿ ಮಾಡಬೇಕು ಅನ್ನುವುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಖಂಡಿತವಾಗಿಯೂ ಇನ್ನು ಆರು ತಿಂಗಳಲ್ಲಿ ಅಗತ್ಯ ವಸ್ತಗಳ ಮೇಲಿನ ತೆರಿಗೆ ಕಡಿಮೆ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.