ಬೆಂಗಳೂರು : ಶಿವಮೊಗ್ಗ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ತಮ್ಮ ಮೊದಲ ವಿಧಾನ ಪರಿಷತ್ ಅಧಿವೇಶನದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಕಳೆದ 2 ವರ್ಷ ಅವಧಿಯ ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಹೊರತಾಗಿ ಯಾವುದೇ ಪಕ್ಷಗಳು ಇದ್ದಿದ್ದರೆ ದೇವರೇ ನಮ್ಮನ್ನ ಕಾಪಾಡಬೇಕಿತ್ತು ಎಂದು ಜನಸಾಮಾನ್ಯರು ಹೇಳ್ತಿದ್ದಾರೆ ಎಂದು ಡಿ.ಎಸ್.ಅರುಣ್ ಹೇಳಿದರು. ಈ ಮೂಲಕ ತಮ್ಮ ಪ್ರಥಮ ಭಾಷಣದ ಆರಂಭದಲ್ಲೇ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.