ಭದ್ರಾವತಿಯಲ್ಲಿ ಶ್ವಾನಗಳ ಜೀವಂತ ಸಮಾಧಿ ಆರೋಪ 

ಭದ್ರಾವತಿ: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಬಳಿಯ ಕಂದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಲಾಗಿದೆ.

ಆದರೆ ನಾಯಿಗಳನ್ನು ಹಿಡಿದು ಜೀವಂತ ಸಮಾಧಿ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ನಾಯಿಗಳನ್ನು ಹಿಡಿಸಿ ದೂರ ಬಿಡುವುದಾಗಿ ಹೇಳಿದ್ರು. ಆದರೆ ಜೆಸಿಪಿಯಿಂದ ಗುಂಡಿ ತೊಡಿಸಿ ಜೀವಂತ ಸಮಾಧಿ ಮಾಡಿದ್ದಾರೆ. ಸುಮಾರು ೩೦೦ರಿಂದ ೪೦೦ ನಾಯಿಗಳನ್ನು ಹಿಡಿಯಲಾಗಿದೆ. ಅದರಲ್ಲಿ ೫೦ಕ್ಕೂ ಅಧಿಕ ನಾಯಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಕ್ಕದಲ್ಲಿ ಕೆಲಸ ಮಾಡುವವರಿಗೆ ನಾಯಿಗಳು ಕೂಗುವ ಶಬ್ದ ಕೇಳಿದೆ. ಹೋಗಿ ಅಗೆದು ನೋಡಿದಾಗ ಒಂದು ನಾಯಿ ಸಿಕ್ಕಿದೆ. ಜೆಸಿಪಿಯಿಂದ ಆಳವಾಗಿ ಗುಂಡಿ ತೋಡಿ ಜೀವಂತ ಸಮಾಧಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.