ಶಿವಮೊಗ್ಗ: ಬಿಜೆಪಿ ಹಿಂದುಳಿದ ವರ್ಗಗಳ ಶಿವಮೊಗ್ಗ ನಗರ ಮೋರ್ಚಾ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೧ನೇ ಜನ್ಮದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೧೭ರಿಂದ ಅಕ್ಟೋಬರ್ ೭ರವರೆಗೆ ರಾಜ್ಯವ್ಯಾಪಿಯಾಗಿ ಸೇವೆ ಮತ್ತು ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ವಿನೋಬನಗರದ ಮಾದವ ನೆಲೆ ಮತ್ತು ಜೀವನ ಸಂಜೆ ವೃದ್ಧಾಶ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಈ.ಕಾಂತೇಶ್ ಸಿಹಿ ಮತ್ತು ಹಣ್ಣು ವಿತರಣೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಸಿ.ಹೆಚ್.ಮಾಲತೇಶ್, ಮೋರ್ಚಾದ ನಗರಾಧ್ಯಕ್ಷರಾದ ಕೆ.ಹೆಚ್.ಮಹೇಶ್, ಪ್ರಮುಖರಾದ ಹಿರಣ್ಣಯ್ಯ, ಸೋಗಾನೆ ರಮೇಶ್, ಪುರುಷೋತ್ತಮ, ಪಾಲಿಕೆ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ವೆಂಕಟೇಶ್ ನಾಯ್ಡು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.