ಶಿವಮೊಗ್ಗ : ಗಣರಾಜ್ಯೋತ್ಸವದಂದು ರಾಯಚೂರಿನ ಜಿಲ್ಲಾ ನ್ಯಾಯಾಧೀಶರ ವರ್ತನೆಯನ್ನ ಖಂಡಿಸಿ ಜಿಲ್ಲಾ ಛಲವಾದಿ ಮಹಾಸಭಾದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸುರೇಶ್ ಪಾಪಣ್ಣ, ಇಡೀ ಪ್ರಪಂಚವೇ ಡಾ. ಬಿ.ಆರ್.ಅಂಬೇಡ್ಕರ್ ಅವರ ಜ್ಞಾನವನ್ನ ಕೊಂಡಾಡುತ್ತಿರುವ ಸಂದರ್ಭದಲ್ಲಿ, ಸಂವಿಧಾನ ಹಾಗೂ ಕಾನೂನಿನ ಅರಿವಿರುವ ನ್ಯಾಯಾಧೀಶರ ಈ ವರ್ತನೆಯಿಂದಾಗಿ ಜನಸಾಮಾನ್ಯರು ನ್ಯಾಯಾಲಯಗಳ ಮೇಲಿಟ್ಟಿದ್ದ ನಂಬಿಕೆ ಹುಸಿಯಾದಂತಾಗಿದೆ. ಹೀಗಾಗಿ ಆ ನ್ಯಾಯಾಧೀಶರನ್ನ ಕೆಲಸದಿಂದ ವಜಾ ಮಾಡಿ, ಅವರ ಮೇಲೆ ಎಸ್‌ಸಿ - ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ದೇಶದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು. ಈ ಕುರಿತಾಗಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.