ರಾಯಚೂರು ನ್ಯಾಯಾಧೀಶರ ವಜಾಕ್ಕೆ ಮುಂದುವರೆದ ಆಗ್ರಹ

ಶಿವಮೊಗ್ಗ : ಗಣರಾಜ್ಯದಿನದಂದು ರಾಯಚೂರು ನ್ಯಾಯಾಧೀಶರ ವರ್ತನೆಯನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಧೀಶರ ವಿರುದ್ಧ ಆಕ್ರೋಶ ಘೋಷಣೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಈ ವೇಳೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿ ಸತ್ಯ, ನ್ಯಾಯಾಧೀಶರ ಈ ವರ್ತನೆಯನ್ನ ನಾವು ಖಂಡಿಸುತ್ತೇವೆ. ಈ ಕೂಡಲೇ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು, ನ್ಯಾಯಾಧೀಶರನ್ನ ವಜಾ ಮಾಡಿಸಬೇಕು. ಇಲ್ಲಾವಾದಲ್ಲಿ, ಮುಂದೆ ರಾಜ್ಯ ಸರ್ಕಾರ ಮಾಡುವ ಎಲ್ಲಾ ಕಾರ್ಯಕ್ರಮಗಳಿಗೆ ನಾವು ಅಡ್ಡಿಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಕುರಿತಾಗಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನ ಸಲ್ಲಿಸಿದ್ದಾರೆ.