ರಸ್ತೆಯಲ್ಲಿ ಹೊಂಡಗಳಿವೆಯಾ? ಹೊಂಡದಲ್ಲಿ ರಸ್ತೆ ಇದೆಯಾ? 

ಗರ್ತಿಕೆರೆ : ಕೋಡೂರು ಮತ್ತು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಂತಪುರ - ಗರ್ತಿಕರೆ ಸಂಪರ್ಕಿಸುವ ಸುಮಾರು ೧೦ ಕಿ.ಮೀ. ಉದ್ದದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ನಿತ್ಯವು ಇಲ್ಲಿನ ಜನರು ಓಡಾಟಕ್ಕೆ ಪರದಾಡುವಂತಾಗಿದೆ.

1995 ರಲ್ಲಿ ನಬಾರ್ಡ್ ಯೋಜನೆಯಡಿ ಡಾಂಬರೀಕರಣಗೊಂಡ ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಹೊಂಡಗಳಿವೆಯೋ ಅಥವಾ ಹೊಂಡಗಳಲ್ಲಿಯೇ ರಸ್ತೆ ಇದೆಯೋ ಎಂದು ಅನುಮಾನ ಬರುವಷ್ಟರ ಮಟ್ಟಿಗೆ ಈ ರಸ್ತೆ ಹಾಳಾಗಿದೆ. ಈ ಕುರಿತಾಗಿ ಶಾಸಕರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಅಂದ್ಹಾಗೆ ಈ ರಸ್ತೆಯು ಹುಂಚ - ಗರ್ತಿಕೆರೆ ಮಾರ್ಗವಾಗಿ ಕೋಡೂರಿಗೆ ಬಂದು ಅಲ್ಲಿಂದ ಹೊಸನಗರ, ಶಿವಮೊಗ್ಗ, ರಿಪ್ಪನ್‌ಪೇಟೆ, ಬೈಂದೂರು, ಕೊಲ್ಲೂರು, ಕೊಡಚಾದ್ರಿ, ತೀರ್ಥಹಳ್ಳಿ, ಸಾಗರ ಮಾರ್ಗವಾಗಿ ತೆರಳುವವರಿಗೆ ಹತ್ತಿರದ ಮಾರ್ಗವಾಗಿದೆ.