ಫೆ. ೧೮ರಿಂದ ಐದು ದಿನ ನಾಟಕ ಪ್ರದರ್ಶನ 

ಶಿವಮೊಗ್ಗ : ಇಲ್ಲಿನ ರಂಗಾಯಣದಿಂದ ಫೆಬ್ರವರಿ 18ರಿಂದ 22ರವರೆಗೆ ಕಾಲೇಜು ರಂಗೋತ್ಸವ ನಡೆಯಲಿದೆ ಎಂದು ಶಿವಮೊಗ್ಗ ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ರಂಗಾಯಣದ ವತಿಯಿಂದ ಕಾಲೇಜು ರಂಗೋತ್ಸವ ಆಯೋಜನೆ ಮಾಡಲಾಗಿದ್ದು, ಐದು ದಿನಗಳ ಕಾಲ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಾಟಕಗಳು ನಡೆಯಲಿವೆ. ಒಡಲಾಳ, ಆ ಕರಾಳ ರಾತ್ರಿ, ತುರುಬ ಕಟ್ಟುವ ಹದನ, ಅಶ್ವಪರ್ವ ಹಾಗೂ ಈ ಪಗರಣ ನಾಟಕಗಳು ಪ್ರದರ್ಶನವಾಗಲಿವೆ ಎಂದು ಮಾಹಿತಿ ನೀಡಿದರು.