ಮುಂದುವರೆದ ಕರ್ಫ್ಯೂ: ವ್ಯಾಪಾರಿಗಳು ಇನ್ನಷ್ಟು ನಿರಾಳ!

ಶಿವಮೊಗ್ಗ : ಸೋಮವಾರದಿಂದ ಶಿವಮೊಗ್ಗ ನಗರದಲ್ಲಿ ವಿಧಿಸಿದ್ದ ಕರ್ಫ್ಯೂ ಸಂಪೂರ್ಣವಾಗಿ ತೆಗೆಯಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಾರ್ಚ್ 4 ರತನಕ ಕರ್ಫ್ಯೂ ಮುಂದುವರೆಯಲಿದೆ.

ಆದರೆ ವ್ಯಾಪಾರ ವಹಿವಾಟಿಗೆ ಅವಧಿಯನ್ನು ಹೆಚ್ಚಳ ಮಾಡಲಾಗಿದ್ದು, ಬೆಳಗ್ಗೆ 6 ರಿಂದ ರಾತ್ರಿ 7 ಗಂಟೆಯ ತನಕ ಅವಕಾಶ ನೀಡಲಾಗಿದೆ. ರಾತ್ರಿ 7 ಗಂಟೆಯ ನಂತರ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ. ಈ ಮೂಲಕ ವ್ಯಾಪಾರಸ್ಥರು ಇನ್ನಷ್ಟು ನಿರಾಳರಾಗಿದ್ದು, ಮಾರ್ಚ್ 4ರ ನಂತರ ಪೂರ್ಣ ಪ್ರಮಾಣದ ಅವಧಿಯಲ್ಲಿ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ.