ಬೂಸ್ಟರ್ ಡೋಸ್‌ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಚಾಲನೆ 

ಶಿವಮೊಗ್ಗ : ೭೫ನೇ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ೧೮ ವರ್ಷ ಫಲಾನುಭವಿಗಳಿಗೆ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಜುಲೈ ೧೬ರಿಂದ ಸೆಪ್ಟೆಂಬರ್ ೩೦ರವರೆಗೆ  ಒಟ್ಟು ೭೫ ದಿನಗಳ ಕಾಲ ಉಚಿತವಾಗಿ ಲಸಿಕೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶಿಸಿದೆ. ಈ ಹಿನ್ನೆಲೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನ ಆರಂಭವಾಗಿದೆ. ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ಜಿಲ್ಲೆಯಲ್ಲಿ ಒಟ್ಟು ೯ ಲಕ್ಷದ ೮೬ ಸಾವಿರದ ೯೦೯ ೧೮ ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿದ್ದು,ಎಲ್ಲರು ಲಸಿಕೆ ಪಡೆಯಿರಿ. ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ  ಕೇಂದ್ರದಲ್ಲಿಯೂ ಲಸಿಕೆ ಲಭ್ಯವಿರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು.

ಸೊರಬದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಚಾಲನೆ 

ಅಮೃತ ಮಹೋತ್ಸವದ ಅಂಗವಾಗಿ ೭೫  ದಿನಗಳ ಕಾಲ ಉಚಿತ ಕೋವಿಡ್ ಬೂಸ್ಟರ್ ಲಸಿಕೆ ಅಭಿಯಾನ ಆರಂಭವಾಗಿದೆ. ದೇಶಾದ್ಯಂತ ನಡೆಯುತ್ತಿರುವ ಈ ಅಭಿಯಾನಕ್ಕೆ ಸೊರಬದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಚಾಲನೆ ನೀಡಿದ್ರು. ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನವನ್ನು ಉದ್ಘಾಟಿಸಿದ್ರು. ಈ ವೇಳೆ ಮಾತನಾಡಿದ ಅವರು ೧೮ ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟಾರ್ ಡೋಸ್ ಪಡೆದುಕೊಳ್ಳಿ ಎಂದ್ರು. ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಎಂ.ಡಿ ಉಮೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಹಾಗೂ ಪ್ರಭಾರ ತಾಲೂಕು ಆರೋಗ್ಯಧಿಕಾರಿ ಡಾ. ಪ್ರಭು, ಡಾ. ರಜನಿ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.