ಶಿವಮೊಗ್ಗ : ಸ್ಮಾರ್ಟ್‌ಸಿಟಿ ಕಾಮಗಾರಿ ಅಡಿಯಲ್ಲಿ ನಗರದ್ಯಾಂತ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಹಾಗೇನೆ ಎಲ್ಲಾ ಬಸ್ ನಿಲ್ದಾಣಗಳಿಗೆ ನಾಮ ಫಲಕಗಳನ್ನು ಅಳವಡಿಸಲಾಗಿದೆ. ಸಾಮಾನ್ಯವಾಗಿ ಜನರು ಕರೆಯುವ ಹೆಸರನ್ನೇ ಬಸ್ ನಿಲ್ದಾಣಗಳಿಗೆ ಕೂಡ ಇಡಲಾಗಿದೆ. ಆದ್ರೆ ಕೋರ್ಟ್ ಮುಂಭಾಗ ಇರುವ ಬಸ್ ನಿಲ್ದಾಣದ ಹೆಸರು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕೋರ್ಟ್ ಸರ್ಕಲ್‌ನ ಮೂಲ ಹೆಸರು ಮಹಾವೀರ ಸರ್ಕಲ್ ಅಂತ. ಆದ್ರೆ ಜನರು ಅದನ್ನು ಕೋರ್ಟ್ ಸರ್ಕಲ್..ಕೊರ್ಟ್ ಸರ್ಕಲ್..ಅಂತ ಕರೆದು ಕರೆದು ಅದೇ ಹೆಸರು ರೂಡಿಯಾಗಿ ಹೋಗಿದೆ. ಹೀಗಾಗಿಯೇ ಸರ್ಕಲ್ ಬಳಿ ನಿರ್ಮಾಣವಾದ ಬಸ್ ನಿಲ್ದಾಣಕ್ಕೆ ಕೂಡ ಸ್ಮಾಟ್‌ಸಿಟಿಯವರು ಕೋರ್ಟ್ ಸರ್ಕಲ್ ನಿಲ್ದಾಣ ಎಂದೇ ನಾಮಫಲಕ ಹಾಕಲಾಗಿದೆ. ಇದಕ್ಕೀಗ ಜೈನ ಸಮಾಜದವರು ವಿರೋಧ ವ್ಯಕ್ತಪಡಿಸುತ್ತಿದ್ದು ಈ ವಿಚಾರವೀಗ ಚರ್ಚೆಗೆ ಗ್ರಾಸವಾಗಿದೆ.