ಶಿವಮೊಗ್ಗ : ಈಶ್ವರಪ್ಪನವರು ಗ್ರಾಮಪಂಚಾಯಿತಿ ಸದಸ್ಯರ ಹತ್ತಿರ ಓಟ್ ಕೇಳೋ ನೈತಿಕತೆಯನ್ನೆ ಕಳೆದುಕೊಂಡಿದ್ದಾರೆ ಎಂದು ಸಾಗರ ತಾಲುಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಟೀಕಿಸಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಗ್ರಾಮಪಂಚಾಯಿತಿಗೆ ಬಂದ 15 ನೇ ಹಣಕಾಸಿನ ಅನುದಾನವನ್ನ ರಾಜ್ಯದಲ್ಲಿರುವ 6200 ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಲಾಗಿದೆ. ಆದ್ರೆ, ಈ ಗ್ರಾಮಪಂಚಾಯಿತಿಗಳಲ್ಲಿ 5 ಲಕ್ಷ ರೂಪಾಯಿಯ 3 ಕೆವಿ ವೋಲ್ಟ್‌ನ ಹೈಬ್ರೀಡ್ ಸೋಲಾರ್ ಹಾಕಬೇಕೆಂದು ರಾಜ್ಯಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ರೀತಿಯಾಗಿ ರಾಜ್ಯಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳುವುದಾದರೆ ರಾಜ್ಯಮಟ್ಟದಿಂದಲೆ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಕೆ.ಎಸ್. ಈಶ್ವರಪ್ಪ ಮಗನಾದ ಕೆ.ಈ. ಕಾಂತೇಶ್, ಗ್ರಾಮ ಪಂಚಾಯಿತಿಗೆ ಬರುವ ಹಣ ಕಟ್ ಮಾಡಿ. ಯಾವ್ಯಾವುದಕ್ಕೆ ರಾಜ್ಯಮಟ್ಟದಲ್ಲಿ ಟೆಂಡರ್ ಕೊಡೋ ಅವಕಾಶ ಇದ್ಯೋ ಅಲ್ಲಿಗೆ ಕೊಡ್ತಾ ಇದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೇಲ್ನೋಟಕ್ಕೆ ೮೦ ಪರ್ಸೇಂಟ್ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸರು. ಅಲ್ಲದೆ ಈ ಕುರಿತಾಗಿ ನಾನು ಬಹಿರಂಗ ಚರ್ಚೆಗೆ ಕೂಡ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ. ಈಶ್ವರಪ್ಪನವರು ಗ್ರಾಮಪಂಚಾಯಿತಿ ಸದಸ್ಯರ ಹತ್ತಿರ ಓಟ್ ಕೇಳೋ ನೈತಿಕತೆಯನ್ನೆ ಕಳೆದುಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕೆಂದು ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದ್ರು. ಇದೇ ವೇಳೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯ ರಮೇಶ್ ಹೆಗಡೆ ಮಾತಾಡಿ, ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದ್ರು