ಶಿವಮೊಗ್ಗ : ಮಹಾನಗರ ಪಾಲಿಕೆ ಸದಸ್ಯ ರಾಜು.ಎಸ್.ಜಿ ಅವರ ಮೇಲೆ 20 ರಿಂದ 30 ಜನ ಮುತ್ತಿಗೆ ಯತ್ನ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ರಾಜು, ಮೇ 19 ರಂದು ನನಗೆ ಅನಾರೋಗ್ಯದವಿದ್ದ ಕಾರಣ ಮನೆಯಲ್ಲಿಯೇ ಇದ್ದೆ.
ಮದ್ಯಾಹ್ನ 2.30ರವೇಳೆಗೆ ಯಾರೋ ಮನೆಯ ಬಾಗಿಲನ್ನು ಬಡಿದಿದ್ದಾರೆ. ಯಾರೆಂದು ನನ್ನ ಹೆಂಡಿತಿ ಬಾಗಿಲು ತೆಗೆದು ನೋಡಿದರೆ 20 ರಿಂದ 30 ಜನ ಕೂಗಾಡುತ್ತಾ ನಿಂತಿದ್ದರು. ಈ ವೇಳೆ ಆ ಯುವಕರು ರಾಜು ಹಾಗೂ ಅವರ ಹೆಂಡತಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ ವಾರ್ಡಿನ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಎಸ್‌ಡಿಪಿಐಗೆ ಬಿಟ್ಟು ಕೊಡುವಂತೆ ಕೂಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.