ಶಿವಮೊಗ್ಗ : ಇಲ್ಲಿನ ಗಾಂಧಿ ಪಾರ್ಕ್‌ನಲ್ಲಿರುವ ಗಾಂಧೀಜಿ ಪ್ರತಿಮೆಯಲ್ಲಿದ್ದ ಕನ್ನಡಕವನ್ನ ಮಹಾನಗರ ಪಾಲಿಕೆಯಿಂದ ತೆಗೆಯಲಾಗಿದೆ. ಪಾರ್ಕ್‌ನಲ್ಲಿದ್ದ ಗಾಂಧೀ ಪ್ರತಿಮೆಗೆ ಕನ್ನಡಕವನ್ನ ತಂತಿಯಲ್ಲಿ ಸುತ್ತಿ ಕಟ್ಟಲಾಗಿತ್ತು. ಈ ಕುರಿತು ದಕ್ಷಿಣ ಬ್ಲಾಕ್‌ನ ಯುವ ಕಾಂಗ್ರೆಸ್‌ನಿಂದ ಪಾಲಿಕೆ ಆಯುಕ್ತರಿಗೆ ಶೀಘ್ರವಾಗಿ ಕನ್ನಡಕವನ್ನ ಸರಿಪಡಿಸುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆಯುಕ್ತರು ಸರಿಪಡಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಸರಿಪಡಿಸುವ ಬದಲು ಕನ್ನಡಕವನ್ನೇ ತೆಗೆದು ಹಾಕಲಾಗಿದೆ.
ಈ ಕುರಿತು ಕನ್ನಡ ಮೀಡಿಯಂ ವಾಹಿನಿಯೊಂದಿಗೆ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ಪಾರ್ಕ್ ಅಭಿವೃದ್ಧಿಗೆಂದು ೩ ಕೋಟಿ ಮೀಸಲಿಡಲಾಗಿದೆ. ಇದಕ್ಕೆ ಟೆಂಡರ್ ಕೂಡ ಕರೆಯಲಾಗಿತ್ತು. ಆದ್ರೆ ಸಿಂಗಲ್ ಟೆಂಡರ್ ಅಗಿದ್ದರಿಂದ ಅದು ಕ್ಯಾನ್ಸ್‌ಲ್ ಆಗಿದೆ. ಗಾಂಧೀಜಿಯವರ ಕನ್ನಡ ಹಾಳಾಗಿದ್ದರಿಂದ ನಮ್ಮ ಎಂಜಿನಿಯರ್‌ಗೆ ಹೇಳಿ ತೆಗೆಸಿದ್ದೇನೆ. ಗಾಳಿ, ಮಳೆಗೆ ಮಾಮೂಲಿ ಕನ್ನಡಕದ ಕಬ್ಬಿಣ ಹಾಳಾಗುವುದರಿಂದ ರಾಟ್ ಐರನ್ ಬಳಸಬೇಕು. ಹೀಗಾಗಿ ಇನ್ನೊಂದು ವಾರ ಇಲ್ಲವೇ ಹದಿನೈದು ದಿನದಲ್ಲಿ ಹೊಸ ಕನ್ನಡಕವನ್ನ ಹಾಕಲಾಗುವುದು ಎಂದು ಮಾಹಿತಿ ನೀಡಿದರು