ಶಾಲೆಗಳು ಮತ್ತೆ ಬಂದ್? !

ದಿನೇ ದಿನೆ ಕೊರೊನಾ ಅಬ್ಬರ ಹೆಚ್ಚಾಗ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕಠಿಣ ಕ್ರಮ ಅನಿವಾರ್ಯ. ನವೋದಯ ಶಾಲೆ ಹಾಗೂ ವಸತಿ ಶಾಲೆಗಳನ್ನು ಬಂದ್ ಮಾಡಬೇಕಾದ ಸ್ಥಿತಿ ಎದುರಾಗಬಹುದು. ಸರ್ಕಾರ ಅದಕ್ಕೂ ಸಿದ್ಧವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಿ.ಸಿ.ನಾಗೇಶ್, ಪೋಷಕರು ಆತಂಕಪಡುವ ಅಗತ್ಯ ಇಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಲಕ್ಷಣ ಕಂಡುಬಂದರೆ ಕ್ರಮ ತೆಗೆದುಕೊಳ್ತೀವಿ. ಪರೀಕ್ಷೆ ರದ್ದು ಮಾಡುವ ಸಂದರ್ಭ ಬಂದರೂ ಮಾಡ್ತೇವೆ. ಶಾಲೆ ಬಂದ್ ಮಾಡುವ ಸನ್ನಿವೇಶ ಎದುರಾದರೂ ಹಿಂದೇಟು ಹಾಕಲ್ಲ. ತಜ್ಞರ ಅಭಿಪ್ರಾಯದ ಪ್ರಕಾರ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಕೊನೆ ಕ್ಷಣದವರೆಗೂ ಗಮನಿಸುತ್ತೇವೆ. ಶಾಲೆ ಬಂದ್ ಮಾಡಬೇಕಾದ ಪರಿಸ್ಥಿತಿ  ಎದುರಾದರೆ ಅದಕ್ಕೂ ನಾವು ಸಿದ್ದರಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.