ನಗರದ ಜನರ ಸಮಸ್ಯೆಗೆ ದನಿಯಾಗಲು ಮುಂದಾದ ಕಾಂಗ್ರೆಸ್

ಹೈಲೆಟ್ಸ್ : 

ನಗರದ ಜನರ ಸಮಸ್ಯೆಗೆ ದನಿಯಾಗಲು ಮುಂದಾದ ಕಾಂಗ್ರೆಸ್
ಪ್ರತಿ ವಾರ್ಡ್‌ಗೂ ತೆರಳಿ ಸಮಸ್ಯೆಗಳ ಪಟ್ಟಿ
ನಾವು ಸದಾ ನಿಮ್ಮೊಂದಿಗೆ ಎಂಬ ಕಾರ್ಯಕ್ರಮ ಆಯೋಜನೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಉದ್ಘಾಟನೆ

ಶಿವಮೊಗ್ಗ : ನಗರದ ಪ್ರತಿ ವಾರ್ಡ್‌ಗೂ ತೆರಳಿ ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಲು ಜಿಲ್ಲಾ ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ನಾವು ಸದಾ ನಿಮ್ಮೊಂದಿಗೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶರಾವತಿ ನಗರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಚಾಲನೆ ನೀಡಿದ್ರು.

ಈ ವೇಳೆ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಸರಿಯಾಗಿ ಯಾವುದೇ ಕೆಲಸಗಳು ಆಗ್ತಾಯಿಲ್ಲ. ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನಹರಿಸ್ತಾಯಿಲ್ಲ. ಆದ್ದರಿಂದ ಕಾಂಗ್ರೆಸ್ ವತಿಯಿಂದ ಈ ರೀತಿಯ ಸಾಮಾಜಿಕ ಜವಾಬ್ದಾರಿಯುಳ್ಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ್ರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಮುಖಂಡರಾದ ಶ್ರೀಧರ್, ಜ್ಞಾನ ಪ್ರಕಾಶ್, ಸೌಗಂಧಿಕಾ ಹಾಗೂ ಮತ್ತಿತರರು ಉಪಸ್ಥಿತರಿದ್ರು.