ಮಳೆಯಿಂದ ಶಿವಮೊಗ್ಗ ಮುಳುಗಲು ಕೆ.ಎಸ್.ಈಶ್ವರಪ್ಪ ಕಾರಣ

ಶಿವಮೊಗ್ಗ : ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಮಳೆಗೆ ಇಡೀ ನಗರವೇ ಮುಳುಗಿದೆ. ಇದಕ್ಕೆ ನೇರ ಕಾರಣ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.

ಮಳೆಹಾನಿಯ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಮಾಟ್‌ಸಿಟಿ ಅಡಿಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಗಳಿಂದಲೇ ಇಷ್ಟು ಹಾನಿಯಾಗಿದೆ. ಕಾಮಗಾರಿಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ. ನಮ್ಮ ಶಾಸಕರು ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಯಾವ ಮುಖಂಡರು ಕೂಡ ಕಾಮಗಾರಿ ಹೇಗೆ ನಡೆಯಿತ್ತಿದೆ ಅನ್ನೋದರ ಕುರಿತು ಒಂದು ಬಾರಿಯು ವೀಕ್ಷಣೆ ಮಾಡಿಲ್ಲ.

ಇನ್ನು ಸ್ಮಾರ್ಟ್ ಎಂಡಿ ಹೊರಬರದೆ ಕೇವಲ ಹಣ ಕಲೆಕ್ಷನ್ ಮಾಡಿ ಮಂತ್ರಿಗಳಿಗೆ ಕೊಡುವ ಕೆಲಸ ಮಾಡಿದ್ದಾರೆ. ಒಂದು ವರ್ಷದಲ್ಲಿ ಸ್ಮಾರ್ಟ್‌ಸಿಟಿಯ ಎಲ್ಲಾ ಕಾಮಗಾರಿಗಳು ಹಾಳಾಗಿ ಹೋಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.