ಶಿವಮೊಗ್ಗ : ಹಿಜಾಬ್-ಕೇಸರಿ ಶಾಲು ಸಂಘರ್ಷದಿಂದಾಗಿ ರಜೆ ನೀಡಲಾಗಿದ್ದ ಪಿಯುಸಿ ಹಾಗೂ ಪದವಿ ಕಾಲೇಜುಗಳು ಒಪನ್ ಆಗಿವೆ. ಯಾವುದೇ ಧಾರ್ಮಿಕ ಸಂಕೇತಗಳನ್ನ ಧರಿಸದೇ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಬೇಕು. ಹಾಗೂ ಆದಷ್ಟು ಬೇಗನೇ ಶಾಲಾ ಕಾಲೇಜುಗಳನ್ನು ಓಪನ್ ಮಾಡಬೇಕೆಂದು ಕೋರ್ಟ್ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ ಪ್ರೌಢ ಶಾಲೆಗಳನ್ನ ಒಪನ್ ಮಾಡಿದ್ದ ಸರ್ಕಾರ, ಇಂದಿನಿಂದ ಪಿಯುಸಿ ಹಾಗೂ ಪದವಿ ಕಾಲೇಜುಗಳನ್ನ ತೆರೆಯಲು ಆದೇಶ ಹೊರಡಿಸಿತ್ತು. ಆದ್ದರಿಂದ ರಾಜ್ಯಾದ್ಯಂತ ಕಾಲೇಜುಗಳು ಓಪನ್ ಆಗಿವೆ. ಶಾಂತಿ ಕಾಪಾಡುವ ದೃಷ್ಟಿಯಿಂದ ಖಾಕಿ ಕಣ್ಗಾವಲಲ್ಲಿ ಕಾಲೇಜುಗಳು ಓಪನ್ ಆಗಿವೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ೨೦೦ ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಫೆಬ್ರವರಿ 19ರ ರಾತ್ರಿ 9 ಗಂಟೆವರೆಗೆ ಇದು ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ.