ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರು ಸುಮಾರು ೬೦ ವರ್ಷಗಳಿಂದ ಈಗಲೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಗುವಳಿ ಭೂಮಿಗೆ ಹಕ್ಕು ಪತ್ರ ಸಿಗದೆ ಹೋರಾಟ ಮುಂದುವರೆಸಿದ್ದಾರೆ. ಆದರೂ ಇವರ ಹೋರಾಟಕ್ಕೆ ಪ್ರತಿಫಲ ಸಿಕ್ಕಿಲ್ಲ.
ಈ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಶರಾವತಿ ಅಭಯಾರಣ್ಯ ಹಾಗೂ ಅರಣ್ಯ ಕಾಯಿದೆ ಕುರಿತು ಚರ್ಚೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ಹಾಲಪ್ಪ ಹರತಾಳು, ೧೯೪೨ರಲ್ಲಿ ಶರಾವತಿ ಯೋಜನೆ ಆರಂಭವಾಯ್ತು. ಬಳಿಕ ಲಿಂಗನಮಕ್ಕಿ ಡ್ಯಾಂ ಕಟ್ಟುವ ಕಾರ್ಯ ಆರಂಭವಾಯ್ತು. ಅದನ್ನು ೧೯೫೮ರಿಂದ ೧೯೬೮ರವರೆಗೆ ಕಟ್ಟಿದ್ದಾರೆ. ಆಗ ಸುಮಾರು ೧೩೨ ಹಳ್ಳಿಗಳು ಮುಳುಗಡೆಯಾಗಿವೆ. ೧೨ ಸಾವಿರ ಕುಟುಂಬಗಳು ಸ್ಥಾಳಾಂತರವಾದವು. ಆಗ ಒಂದಷ್ಟು ಜನರಿಗೆ ಜಮೀನು ಕೊಡಲಾಗಿದೆ. ಆದ್ರೆ ಹಕ್ಕುಪತ್ರವನ್ನು ಇದುವರೆಗೂ ಕೊಟ್ಟಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಆ ರೈತರನ್ನು ಒಕ್ಕಲೆಬ್ಬಿಸಬಾರದು. ತಾವು ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಹಕ್ಕುಪತ್ರ ಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ರು.
ಬಳಿಕ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ೩೫೬೫ ಎಕರೆ ಭೂಮಿಯನ್ನು ಜನರ ವೈಯಕ್ತಿಕ ಹೆಸರಿಗೆ ಮಾಡಿಕೊಟ್ಟಿದ್ದೇವೆ. ಉಳಿದ ೨೭೩೭ ಎಕರೆ ಜಮೀನಿಗೆ ಸಂಬAಧಿಸಿದAತೆ ತಾಂತ್ರಿಕ ದೋಷ ಕಂಡುಬರುತ್ತಿದೆ ಎಂದು ಮುಖ್ಯಂತ್ರಿಗಳ ಗಮನಕ್ಕೆ ತಂದ್ರು.