ಶಿವಮೊಗ್ಗ : ಸಿಎಂ ಇಬ್ರಾಹಿಂ ಅವರ ಒಂದು ಹೆಜ್ಜೆಯ ಧೂಳು ಕೂಡ ನಮ್ಮ ಪಾರ್ಟಿ ಒಳಗೆ ಸೇರಿಸಲು ಬಿಡಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸಿಎಂ ಇಬ್ರಾಹಿಂ ಬಿಜೆಪಿಗೆ ಬಂದರೆ ಕರೆದು ಕೊಳ್ತೀರ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿಎಂ ಇಬ್ರಾಹಿಂ ಎಷ್ಟರ ಮಟ್ಟಿಗೆ ಅವರು ಅನ್ಯಾಯ ಮಾಡಿದ್ದಾರೆ ಎಂದು ಗೊತ್ತಿದೆ. ಯಾವುದೇ ಕಾರಣಕ್ಕೂ ಸಿಎಂ ಇಬ್ರಾಹಿಂ ಅವರನ್ನ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಹೇಳಿದರು.