ಕೇಂದ್ರ ಬಜೆಟ್ : ಹೆಚ್ಚಿದೆ ಜನರ ನಿರೀಕ್ಷೆ 

ದೆಹಲಿ : ಕೊರೊನಾ ಮೂರನೇ ಅಲೆಯ ಮಧ್ಯೆ ಮಂಡನೆ ಆಗಲಿರುವ 2022ರ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾದೆ. ಇದೀಗ ಎಲ್ಲರ ಕಣ್ಣು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಡೆ ನೆಟ್ಟಿದೆ.

ಯಾಕೆಂದರೆ ಫೆಬ್ರವರಿ 1ನೇ ತಾರೀಕಿನಂದು ಅವರು ತಮ್ಮ ನಾಲ್ಕನೇ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಹಲವು ವರ್ಗದ ಜನರಂತೂ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇವರೆಲ್ಲಾ ಈ ಬಾರಿಯ ಬಜೆಟ್‌ನಿಂದಾಗಿ ನಮಗೇನಾದುರು ಸಿಹಿ ಸುದ್ಧಿ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ.