ಗುಂಡು ತುಂಡು ಪಾರ್ಟಿ ಮಾಡಿ ತಗಲಾಕಿಕೊಂಡರು 

ಶಿವಮೊಗ್ಗ : ಎಲ್ಲಿ ಬೇಕೆಂದರಲ್ಲಿ ಎಣ್ಣೆ ಪಾರ್ಟಿ ಮಾಡುವವರೇ ಇನ್ಮುಂದೆ ಸ್ವಲ್ಪ ಎಚ್ಚರವಾಗಿರಿ. ಅದರಲ್ಲೂ ಕಾಡಿನಲ್ಲಿ ಕೂತು ನಶೆ ಏರಿಸಿಕೊಳ್ಳುವ ಮಂದಿ ಇನ್ಮುಂದೆ ಕಾಡಿನ ಕಡೆಗೆ ಹೋಗದೆ ಇದ್ರೆ ಒಳ್ಳೆಯದು.

ಹೌದು, ಭದ್ರ ಅರಣ್ಯ ವ್ಯಾಪ್ತಿಯಲ್ಲಿ ಗುಂಡು ತುಂಡಿನ ಪಾರ್ಟಿ ಮಾಡಿ, ಮೋಜು ಮಸ್ತಿ ಮಾಡ್ತಾ ಇದ್ದೋರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದರ್ಶನ್ ಗೌಡ, ಕಾರ್ತಿಕ್, ಕೀರ್ತನ್ ಹಾಗೂ ಸಂತೋಶ್ ಎಂಬ ನಾಲ್ವರು ಭದ್ರ ಅರಣ್ಯ ವ್ಯಾಪ್ತಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲದೇ ಸಖತ್ ಪಾರ್ಟಿ ಮಾಡಿ, ಅರಣ್ಯ ಇಲಾಖೆಯವರ ಕೈ ಯಲ್ಲಿ ತಗಲಾಕಿಕೊಂಡಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿದ್ದಾರೆ.