ಶಿವಮೊಗ್ಗ : ಆರ್‌ಎಮ್‌ಎಲ್ ನಗರ ಹಾಗು ಮಂಜುನಾಥ್ ಬಡಾವಣೆಯ ಸುತ್ತಾಮುತ್ತಾ ಅನ್ಯ ಕೋಮಿನವರಿಂದ ಅನೇಕ ಅನೈತಿಕ ಹಾಗೂ ದುಷ್ಕೃತ್ಯಗಳು ನಡೆಯುತ್ತಿದ್ದು ಅಂತವರನ್ನ ಕೂಡಲೇ ಬಂಧಿಸಬೇಕೆಂದು ಮಂಜುನಾಥ ಬಡಾವಣೆ ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ಸಲ್ಲಿದ್ದಾರೆ.
ಈ ಕುರಿತಾಗಿ ಮಾತನಾಡಿದ ಹಿಂದೂ ಸಂಘಟನೆ ಮುಖಂಡ ದೀನ್ ದಯಾಳ್, ಶಿವಮೊಗ್ಗ ನಗರದಲ್ಲಿ ಹಲವು ದಿನಗಳಿಂದ ಅನ್ಯ ಕೋಮಿನವರು ಹಿಂದೂ ಯುವಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಹಾಗೂ ಹಿಂದೂ ಹೆಣ್ಣು ಮಕ್ಕಳನ್ನ ಚುಡಾಯಿಸುತ್ತಿದ್ದಾರೆ. ಜೊತೆಗೆ ಹಿಂದೂ ಹಿರಿಯರಿಗೆ ಅಗೌರವ ತೋರುತ್ತಿದ್ದಾರೆ. ಇಂಥವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.