ಶಿವಮೊಗ್ಗ : ಕೊಲೆಗಾರರಿಗೆ ಧರ್ಮ ಇಲ್ಲ ಎನ್ನುವುದಾದರೆ ಧರ್ಮವನ್ನು ನೋಡಿಯೆ ಯಾಕೆ ಕೊಲೆ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಹರ್ಷ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೊಡಗು ಸಂಸದನಾಗಿರುವ ನಾನು ಹಿಂದೂ ಕಾರ್ಯಕರ್ತರಾಗಿದ್ದ ರಾಜು, ಕುಟ್ಟಪ್ಪ, ಪ್ರವೀಣ್ ಪೂಜರಿ ಮಾಗಡಿ ರವಿ ಹೀಗೆ ಹಲವರ ಹತ್ಯೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಯಾವುದೋ ವೈಯಕ್ತಿಕ ದ್ವೇಷಕ್ಕೆ ಹರ್ಷನ ಕೊಲೆ ನಡೆದಿಲ್ಲ. ಮುಸಲ್ಮಾನರ ಒಂದು ವರ್ಗದ ಧರ್ಮಾಂಧತೆಗೆ ಹರ್ಷ ಬಲಿಯಾಗಿದ್ದಾನೆ. ಈ ಪ್ರಕರಣವನ್ನು ಕೊಲೆಯೆಂದು ಪರಿಗಣಿಸಿ ಆರೋಪಿಗಳ ಮೇಲೆ ೩೦೨ ಕೇಸ್ ಹಾಕಿದರೆ ಅವರು ಎರಡು, ಮೂರು ತಿಂಗಳಲ್ಲಿ ಬೇಲ್ ತೆಗೆದುಕೊಂಡು ಹೊರ ಬರ್‍ತಾರೆ. ಆದ್ದರಿಂದ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.