ಮಹಿಳಾ ದಿನಾಚರಣೆ ಅಂಗವಾಗಿ ಕೆನರಾ ಉತ್ಸವ 

ಶಿವಮೊಗ್ಗ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಲಯದ ವತಿಯಿಂದ ಕೆನರಾ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮಹಿಳಾ ಉದ್ಯಮಿಗಳಿಂದ ತಯಾರಿಸಲ್ಪಟ್ಟ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟದ ಉತ್ಸವ ಇದಾಗಿದ್ದು ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ.ಎಂ.ಎಲ್ ಚಾಲನೆ ನೀಡಿದರು.

ಉತ್ಸವದಲ್ಲಿ ಮಹಿಳೆಯರಿಂದ ತಯಾರಿಸಿದ ಸಿದ್ದ ಉಡುಪುಗಳು, ಕರಕುಶಲ ವಸ್ತುಗಳು ಆಹಾರ ಪದಾರ್ಥಗಳು, ಗ್ರಾಮೀಣ ಉತ್ಪನ್ನಗಳು ಹಾಗೂ ಹಲವು ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಕೆನರಾ ಬ್ಯಾಂಕ್ ಪ್ರದೇಶಿಕ ಕಚೇರಿ ಬಳಿ ನಡೆಯುತ್ತಿರುವ ಎರಡು ದಿನಗಳ ಈ ಉತ್ಸವವು ಶುಕ್ರವಾರವೂ ಇರಲಿದೆ.