ಶಿವಮೊಗ್ಗ : ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯನ್ನು ಖಂಡಿಸಿ ಆರೋಪಿಗಳ ಪ್ರತಿಕೃತಿ ಧಹಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಮತಾಂಧ ಜಿಹಾದಿ ಶಕ್ತಿಗಳಿಗೆ ದಿಕ್ಕಾರ ಹಾಕಿದರು.
ಈ ವೇಳೆ ಮಾತನಾಡಿದ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ರಾಷ್ಟ್ರಭಕ್ತ ಹಿಂದೂಗಳನ್ನು ಹೇಡಿಗಳ ರೀತಿಯಲ್ಲಿ ಹೋಗಿ ಕೊಲೆ ಮಾಡುತ್ತಾರೆ. ಇಂಥವರನ್ನು ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಗುಂಡಿಟ್ಟು ಕೊಲ್ಲಬೇಕು. ಇಲ್ಲವೇ ತಕ್ಷಣ ಗಲ್ಲಿಗೇರಿಸಬೇಕು. ವಿಶ್ವಸಂಸ್ಥೆ ಏನು ಮಾಡುತ್ತಿದೆ, ವಿಶ್ವ ಸಂಸ್ಥೆ ಯಾಕೆ ಬೇಕು.? ವಿಶ್ವ ನಾಯಕ ನರೇಂದ್ರ ಮೋದಿಯವರ ಕೊಲೆಗೆ ಸಂಚು ರೂಪಿಸಲಾಗಿದೆ. ಹೀಗಾಗಿ ಈಗಲೇ ಸಭೆ ಕರೆದು, ನಾಯಕರಾದ ಮೋದಿಯವರ ಕೊಲೆ ಬೆದರಿಕೆ ಬಗ್ಗೆ ಸಭೆ ನಡೆಸಿ, ನಿರ್ಣಯ ತೆಗೆದುಕೊಳ್ಳಬೇಕು. ಹಿಂದೂ ಟೈಲರ್ ಗೆ ಆದ ರೀತಿಯಲ್ಲಿಯೇ ಮುಸಲ್ಮಾನರಿಗೆ ಆದರೆ, ಏನಾಗುತ್ತದೆ.? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.