ಬಿಎಸ್‌ವೈ ಕಡೆಗಣಿಸ್ತಾ ಬಿಜೆಪಿ..? 

ಬೆಂಗಳೂರು : ನಾನು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. 150 ಸ್ಥಾನ ಗೆಲ್ಲುವಂತೆ ಮಾಡ್ತೀನಿ ಅಂತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳ್ತಾನೆ ಇದಾರೆ. ಆದ್ರೆ, ಇದೇ ತಿಂಗಳ 12 ರಿಂದ ರಾಜ್ಯ ಪ್ರವಾಸಕ್ಕೆ ಮೂರು ತಂಡಗಳನ್ನು ಬಿಜೆಪಿ ನೇಮಕ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ, ಅರುಣ್ ಸಿಂಗ್, ನಳೀನ್ ಕುಮಾರ್ ಕಟೀಲ್ ನೇತೃತ್ವದ ತಂಡಗಳಾಗಿದ್ದು, ಯಡಿಯೂರಪ್ಪನವರ ಹೆಸರು ಅರುಣ್ ಸಿಂಗ್ ಅವರ ತಂಡದಲ್ಲಿ ಇದೆ.

ಈ ಮೂಲಕ ಬಿಎಸ್‌ವೈ ಅವರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟರ್‌ಗಳು ಹರಿದಾಡ್ತಾ ಇವೆ. ಬಿಎಸ್‌ವೈ ಕಡೆಗಣಿಸಿದ್ರೆ ಬಿಜೆಪಿಗೆ 30 ದಿನಗಳು ಬರುತ್ವೆ ಅಷ್ಟೇ. ಅವರು ಕೆಲ ಜಿಲ್ಲೆಗಳಿಗೆ ಸೀಮಿತವಲ್ಲ. ಇಡೀ ರಾಜ್ಯದ ಶಕ್ತಿ ಅನ್ನೋ ಪೋಸ್ಟರ್‌ಗಳ ಮೂಲಕ ಅಭಿಮಾನಿಗಳು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಎಸ್‌ವೈ ಇಲ್ಲದೆ ನೀವು ಪ್ರವಾಸ ಮಾಡಿ ಗೆಲ್ಲಿಸುತ್ತೇವೆ ಅನ್ನೋದು ಭ್ರಮೆ ಎಂದು ಕಿಡಿಕಾರಿದ್ದಾರೆ.