ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ

ಶಿವಮೊಗ್ಗ : ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವರಿ ಸಚಿವ ಕೆ.ಸಿ.ನಾರಾಯಣ ಗೌಡ ಭೇಟಿ ನೀಡಿದ ಸಂದರ್ಭದಲ್ಲಿ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನ ಪ್ರತಿನಿಧಿಗಳು ಸ್ಥಳ ಪರಿಶೀಲನೆಗೆ ಬರ್‍ತಾರೆ ಆದ್ರೆ ಪರಿಹಾರ ನೀಡಲ್ಲ... ಅಧಿಕಾರಿಗಳು ಭೇಟಿನೆ ನೀಡಲ್ಲ... ಈ ವಿಚಾರವಾಗಿ ನಿಮ್ಮನ್ನಲ್ಲದೆ ಮತ್ಯಾರನ್ನ ಕೇಳೋಣ... ಎಂದು ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಹಾಗೂ ಕಾಂಗ್ರೆಸ್ ಯುವ ಮುಖಂಡ ರಂಗನಾಥ್ ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಪ್ರಮುಖರು ಹಾಗೂ ಬಿಜೆಪಿ ಪ್ರಮುಖರ ವಿರುದ್ಧ ಮಾತಿಗೆ ಮಾತು ಬೆಳೆಯತೊಡಗಿತು. ಕೆಲ ಕಾಲ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.