ಸುಟ್ಟ ಕಾರು - ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ 

ತೀರ್ಥಹಳ್ಳಿ: ತಾಲೂಕಿನಲ್ಲಿ ಸುಟ್ಟ ಕಾರು ಹಾಗೂ ಸುಟ್ಟ ವ್ಯಕ್ತಿಯ ಮೂಳೆಗಳು ಸಿಕ್ಕಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಾವುದೇ ಸಾಕ್ಷö್ಯ ಸಿಗದಿರಲೆಂದು ಕೊಲೆ ಮಾಡಿದ ಆರೋಪಿಗಳ ಪ್ಲಾನ್ ಕೊನೆಗೂ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಅಂದಹಾಗೆ ಈ ಪ್ರಕರಣ ದೃಶ್ಯ ಸಿನಿಮಾ ಮಾದರಿಯಲ್ಲಿ ನಡೆದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿಟ್ಲುಗೋಡು ಎಂಬ ಹಳ್ಳಿ ಸಮೀಪ ದಟ್ಟ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾಗಿದ್ದ ಮಾರುತಿ ಸ್ವಿಫ್ಟ್ ಕಾರು ಹಾಗೂ ಅದರಲ್ಲಿ ಸುಟ್ಟ ವ್ಯಕ್ತಿಯ ಮೂಳೆಗಳು ಪತ್ತೆಯಾಗಿದ್ದವು.

ಮೃತನ ಸಂಬAಧಿಕರೇ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಅನ್ನೋ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ಸಾಗರ ತಾಲೂಕು ಆಚಾಪುರ ಗ್ರಾಮದ ಮುಸ್ಲಿಂಪೇಟೆ ನಿವಾಸಿ ೪೫ ವರ್ಷದ ವಿನೋದ್ ಕೊಲೆಯಾದವ ವ್ಯಕ್ತಿ. ಈ ಕಾರು ಇವರಿಗೇ ಸೇರಿದ್ದಾಗಿದೆ. ಆರೋಪಿಗಳಾದ ಮೃತನ ಪತ್ನಿ, ಹಿರಿಯ ಮಗ, ಕಿರಿಯ ಮಗ, ಹೆಂಡತಿಯ ಅಕ್ಕನ ಮಗ ಹಾಗೂ ಮೃತನ ತಮ್ಮ ಎಲ್ಲರೂ ಸೇರಿ ಮನೆಯಲ್ಲೇ ತಂತಿ ಬಿಗಿದು, ರಾಡಿನಿಂದ ತಲೆ ಮೇಲೆ ಹಲ್ಲೆ ನಡೆಸಿ ವಿನೋದ್‌ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಸಾಕ್ಷö್ಯ ಸಿಗಬಾರದೆಂದು ಫಿನಾಯಿಲ್ ಬಳಸಿ ಸ್ವಚ್ಛ ಮಾಡಿದ್ದಾರೆ. ಅಲ್ಲದೆ ಪೆಟ್ರೋಲ್ ತಂದು ಕಾರಿನಲ್ಲಿ ಮೃತದೇಹ ಇಟ್ಟು ತೀರ್ಥಹಳ್ಳಿ ತಾಲೂಕಿನ ನಿರ್ಜನ ಪ್ರದೇಶದಲ್ಲಿ ಬೆಂಕಿ ಹಚ್ಚಿದ್ದಾರೆ. ಕಾರಿನ ನಂಬರ್ ಪ್ಲೇಟ್‌ಅನ್ನು ಕೂಡ ಬೇರೆ ಕಡೆ ಎಸೆದಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ ಸಂಬAಧ ಈಗಾಗಲೇ ೫ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಡಿವೈಎಸ್‌ಪಿ, ಪಿಐ ಹಾಗೂ ಠಾಣೆಯ ಸಿಬ್ಬಂದಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.