ಭಾರತ್ ಬಂದ್ ರಾಜಕೀಯ ಪ್ರೇರಿತ: ಸಚಿವ ನಾರಾಯಣಗೌಡ

ಶಿವಮೊಗ್ಗ: ಭಾರತ್ ಬಂದ್ ರಾಜಕೀಯ ಪ್ರೇರಿತವಾಗಿದೆ. ಈ ರೀತಿಯ ಬಂದ್ ಅಗತ್ಯ ಇಲ್ಲ ಎಂದು ಸಚಿವ ನಾರಾಯಣಗೌಡ ಹೇಳಿದ್ರು.

ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ತುಂಬಾ ಸುಧಾರಣೆಯಾಗಿದೆ. ಈ ಕಾಯಿದೆಗಳಿಂದ ರೈತರಿಗೆ ಯಾವುದೇ ನಷ್ಟ ಇಲ್ಲ. ಆದ್ರೆ ಈ ಮಧ್ಯವರ್ತಿಗಳಿದ್ದಾರಲ್ಲ, ಅವರಿಗೆ ಲಾಸ್ ಆಗ್ತಿದೆ. ಈ ಹೊಸ ಕಾಯ್ದೆಗಳ ಪ್ರಕಾರ ರೈತರು ತಾವು ಬೆಳೆದಂತಹ ಉತ್ಪನ್ನಗಳನ್ನು ಈಗ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು. ಆದ್ರೆ ಮೋದಲು ಹಾಗಿರಲಿಲ್ಲ ಎಂದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ರಾಜ್ಯದಲ್ಲಿನ ಕ್ರೀಡಾ ವಸತಿಗಳನ್ನು ಅಪ್‌ಗ್ರೇಡ್ ಮಾಡುವ ಮೂಲಕ ೨೦೨೪ರಲ್ಲಿ ನಡೆಯುವ ಪ್ಯಾರಾಲಿಂಪಿಕ್ಸ್ನಲ್ಲಿ ರಾಜ್ಯದ ಸ್ಪರ್ಧಿಗಳು ಭಾಗವಹಿಸುವಂತೆ ಮಾಡಬೇಕಿದೆ ಎಂದರು. ಕ್ರೀಡಾ ವಸತಿಯಲ್ಲಿ ಊಟ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಡಿಸಿ ಮತ್ತು ಸಿಇಒ ಅವರನ್ನು ಕೇಳಿಕೊಳ್ಳಲಾಗಿದೆ ಎಂದರು. ದೇಶದ ಪ್ರಧಾನಿಗೆ ಕ್ರೀಡೆ ಬಗ್ಗೆ ಆಸಕ್ತಿ ಇದೆ. ಒಲಿಂಪಿಕ್‌ನಲ್ಲಿ ಈ ಭಾರಿ ಭಾರತ ಉತ್ತಮ ಸಾಧನೆ ಮಾಡಿದೆ. ಅದೇ ರೀತಿ ಅಪ್‌ಗ್ರೆಡೇಷನ್ ಆದಲ್ಲಿ ರಾಜ್ಯದಲ್ಲಿಯೂ ಕ್ರೀಡೆಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದರು.