ಜುಲೈ 15ಕ್ಕೆ ಬೆಂಕಿ ಸಿನಿಮಾ ಬಿಡುಗಡೆ

ಶಿವಮೊಗ್ಗ : ರಾಮಾರ್ಜುನ ಸಿನಿಮಾದ ನಂತರ ಬೆಂಕಿ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರಲು ಅನೀಶ್ ರೆಡಿಯಾಗಿದ್ದಾರೆ. ಜುಲೈ 15ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು ಸಿನಿಮಾ ಪ್ರಚಾರ ಜೋರಾಗಿಯೇ ನಡಿತಾಯಿದೆ. ಶಿವಮೊಗ್ಗದಲ್ಲಿಯೂ ಮಾಧ್ಯಮಗೋಷ್ಠಿ ನಡೆಸಿ ಬೆಂಕಿ ಸಿನಿಮಾದ ಪ್ರಮೋಶನ್ ಮಾಡಲಾಗಿದೆ.

ಕೌಟುಂಬಿಕ ಹಿನ್ನೆಲೆಯಲ್ಲಿ ಸಾಗುವ ಭಾವುಕತೆಯ ಸಿನಿಮಾ ಇದಾಗಿದ್ದು ಸಿನಿಮಾದ ನಿರ್ದೇಶನವನ್ನು ಶಾನ್ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ರೈಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಂಪದ ಹುಲಿವಾನ ಅಭಿನಯಿಸಿದ್ದಾರೆ. ಶ್ರುತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಕೌಶಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದು. ವಿನಸ್ ನಾಗರಾಜ್ ಮೂರ್ತಿಯವರ ಛಾಯಾಗ್ರಹಣವಿದೆ.