ಸಾಗರ : ಗೂಂಡಾ ಪ್ರವೃತ್ತಿ ನಡೆಯೋದಿಲ್ಲ ಎಂದು ಇಡೀ ಸಾಗರ ಜನತೆಗೆ ಗೊತ್ತಿದೆ. ವಲಸೆ ಬಂದಿರುವ ನಾಯಕರು ಮಾತ್ರ ಇಂಥಹ ನೀಚ ಕೆಲಸ ಮಾಡ್ತಾರೆ ಎಂದು ಶಾಸಕ ಹರತಾಳು ಹಾಲಪ್ಪ ವಿರುದ್ಧ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ.
ಸಾಗರದಲ್ಲಿ ಎಂಡಿಎಫ್ ಸಭೆಯಲ್ಲಿ ಶ್ರೀಪಾದ ಹೆಗೆಡೆ ಹಾಗೂ ಜಗದೀಶ್ ಗೌಡ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹರತಾಳು ಹಾಲಪ್ಪ ಒಬ್ಬ ದುಷ್ಟ ಎಂಎಲ್‌ಎ. ಸಭೆಯಲ್ಲಿ ಹಲ್ಲೆ ನಡೆಸಲೆಂದೇ ಅಧಿವೇಶನಕ್ಕೆ ರಜಾ ಹಾಕಿ ಬಂದಿದ್ದಾರೆ. ಒಂದು ಸಂಸ್ಥೆಯನ್ನು ಹಾಳು ಮಾಡಿದ ವ್ಯಕ್ತಿ ನೀವು. ಈ ಕೃತ್ಯವನ್ನು ನಾನು ಖಂಡನೆ ಮಾಡ್ತೀನಿ.
ಘಟನೆ ಕುರಿತು ಸರ್ಕಾರ ತನಿಖೆ ಮಾಡಬೇಕು. ಈ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಘಟನೆಯ ಕುರಿತಾದ ಫೈಲ್ ಒಂದನ್ನು ನೀಡುತ್ತೇನೆ ಎಂದರು.