ರಾಜ್ಯದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಿಸುವುದು ಕಾಂಗ್ರೆಸ್ ಉದ್ದೇಶ : ಸಿಎಂ 

ಬೆಂಗಳೂರು : ವಿಧಾನಸಭೆಯಲ್ಲಿಯೂ ಹರ್ಷ ಹತ್ಯೆ ಪ್ರಕರಣ ವಿಚಾರ ಪ್ರಸ್ತಾಪವಾಗಿದ್ದು ಸದನದಲ್ಲಿ ವಿರೋಧ ಪಕ್ಷದ ಗದ್ದಲವೇ ಹರ್ಷ ಕೊಲೆಗೆ ಕಾರಣ. ಶಿವಮೊಗ್ಗದಲ್ಲಿ ಷಡ್ಯಂತ್ರದಿಂದ ಹರ್ಷ ಕೊಲೆಯಾಗಿದೆ ಎಂದು  ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಧರಣಿಯಿಂದ ರಾಜ್ಯದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಮಕ್ಕಳಲ್ಲಿ ಗೊಂದಲ ಸೃಷ್ಟಿ ಆಗುವುದು ಬೇಡ. ಸರ್ಕಾರದ ಮಧ್ಯಂತರ ಆದೇಶವನ್ನು ಪಾಲಿಸಬೇಕು. ಶಾಂತಿ ಕಾಪಾಡುವುದು ಕಾಂಗ್ರೆಸ್‌ನ ಗಮನದಲ್ಲಿಲ್ಲ. ಪ್ರಕ್ಷುಬ್ದ ವಾತಾವರಣ ಮಾಡುವುದು ಕಾಂಗ್ರೆಸ್ ಉದ್ದೇಶ ಎಂದು ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಆರೋಪ ಮಾಡಿದ್ದಾರೆ