ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಜಗದೀಶ್ ಆರೋಪ

ಶಿವಮೊಗ್ಗ : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿನ ಸರ್ಕಾರಿ ಮರಳು ಕ್ವಾರಿಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಗೆ ಮಾಡಲಾಗ್ತಾಯಿದೆ. ಇದರಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ, ಶಾಸಕ ಅಶೋಕ್ ನಾಯಕ್ ಕೂಡ ಶಾಮೀಲಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಜಗದೀಶ್ ಆರೋಪಿಸಿದ್ರು.

ಈ ಸಂಬಂಧ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರ ಆಶ್ರಯ ಮನೆಗಳಿಗೆ ಹಾಗೂ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮಗಳ ಕಾಮಗಾರಿಗಳಿಗೆ ಈ ಸರ್ಕಾರಿ ಕ್ವಾರಿಗಳಲ್ಲಿನ ಮರಳನ್ನು ಬಳಸಬೇಕು. ಆದ್ರೆ ಇಲ್ಲಿನ ಮರಳನ್ನು ಖಾಸಗೀ ಕಾಮಗಾರಿಗಳಿಗೆ, ಲಾಭದಾಯಕ ಕಾಮಗಾರಿಗಳಿಗೆ ಬಳಸಲಾಗುತ್ತಿದೆ.

ಹೀಗಾಗಿ ಈ ಸಂಬಂಧ ಸಮಿತಿಯೊಂದನ್ನು ರಚಿಸಿ ತನಖೆಯಾಗಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳನ್ನು ವಜಾಗೊಳಸಿಬೇಕು ಎಂದು ಆಗ್ರಹಿಸಿದ್ರು.