ಶಿವಮೊಗ್ಗ : ಪೊಲೀಸ್ ಇಲಾಖೆಯಲ್ಲಿ ವೇತನ ತಾರತಮ್ಯವಿದೆ. ಮುಂಬಡ್ತಿ ಸಮಸ್ಯೆಯೂ ಇದ್ದು ಬಗೆಹರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ರಿಸರ್ವ್ ಹಾಗೂ ಸಿವಿಲ್ ಪೊಲೀಸರ ವೇತನ, ಕಾರ್ಯವೈಖರಿ ಹಾಗೂ ಮುಂಬಡ್ತಿಯಲ್ಲಿ ಬಹಳ ತಾರತಮ್ಯವಾಗುತ್ತಿದೆ. ಅವರಿಗೆ ಸರಿಯಾದ ರೀತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು. 10 ವರ್ಷದಿಂದ ಸೇವೆಯಲ್ಲಿ ಇರೋರಿಗೂ ಒಂದೇ ವೇತನ.. ಹೊಸದಾಗಿ ಸೇವೆಗೆ ಸೇರಿದವರಿಗೂ ಒಂದೇ ವೇತನ. ಅಲ್ಲದೆ ಗನ್‌ಮೆನ್‌ಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಅವರು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು ಉಪಸ್ಥಿತರಿದ್ದರು.