ಶಿವಮೊಗ್ಗ : ಏನಕ್ಕೆ ಜಗಳ ಮಾಡ್ತಾ ಇದೀರಾ ಅಂತ ಕೇಳಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ನಡೆದಿದೆ. ಬೆಮ್ಮನಕಟ್ಟೆಯ ಎ ಬ್ಲಾಕ್‌ನಲ್ಲಿ ಹರೀಶ್ ನಾಯ್ಕ್ ಮತ್ತು ಶಮಂತ್ ನಾಯ್ಕ್ ಜಗಳವಾಡ್ತಾ ಇದ್ರು. ಕೂಡಲೇ 112ಗೆ ಕರೆ ಮಾಡಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ಏನಕ್ಕೆ ಜಗಳವಾಡ್ತಾ ಇದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಮಂತ್ ನಾಯ್ಕ್ ಪೊಲೀಸ್ ಸಿಬ್ಬಂದಿಯನ್ನು ಎಳೆದಾಡಿ, ಪರಚಿ ಪರಾರಿಯಾಗಿದ್ದಾನೆ. ಈ ಕುರಿತಂತೆ ಶಿವಮೊಗ್ಗದ ವಿನೋನಬನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಅದೇನೆ ಇದ್ರೂ ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿರೋದು ಇಡೀ ಶಿವಮೊಗ್ಗ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.