ಶಿವಮೊಗ್ಗ : ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಮಾಡುವವರ ವಿರುದ್ಧ ಪೊಲೀಸರ ಬೇಟೆ ಮುಂದುವರೆದಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅನುಪಿನಕಟ್ಟೆ ರಸ್ತೆಯಲ್ಲಿರುವ ಸ್ಮಶಾನದ ಎದುರಿನ ತೋಟದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.
ತಪ್ಪಣ್ಣ ಅಲಿಯಾಸ್ ಮಹಮ್ಮದ್ ತಬರಕ್‌ವುಲ್ಲಾ, ಕೃಷ್ಣ ಅಲಿಯಾಸ್ ಗೇಟ್, ರುದ್ರೇಶ್, ರಮೇಶ್ ಎಂಬುವವರು ಬಂಧಿತ ಆರೋಪಿಗಳು. ಆರೋಪಿಗಳಿಂದ ಅಂದಾಜು 52 ಸಾವಿರ ರೂಪಾಯಿ ಮೌಲ್ಯದ 1ಕೆಜಿ 405 ಗ್ರಾಂ ತೂಕದ ಗಾಂಜಾ, ೪೨೦೦ ರೂಪಾಯಿ ನಗದು ಹಾಗೂ 5ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.