ಶಿವಮೊಗ್ಗ : ವೀಕೆಂಡ್ ಕರ್ಫ್ಯೂ ಕುರಿತಾಗಿ ಸತತ ೩ಗಂಟೆಗೂ ಅಧಿಕ ಸಮಯ ಸಭೆ ನಡೆಸಿ ವೀಕೆಂಡ್ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸಚಿವರು, ಬಡ ಜನರ ಜೀವನ ಗಮನದಲ್ಲಿಟ್ಟುಕೊಂಡು ವಿಕೇಂಡ್ ಕಫ್ರ್ಯೂ ಹಿಂತೆಗೆದುಕೊಳ್ಳಲಾಗಿದೆ. ವಿಕೇಂಡ್ ಕಫ್ರ್ಯೂ ಹಿಂತೆಗೆತದಿಂದಾಗಿ, ಜನರ ಮೇಲೆ ಈಗ ಅತಿ ದೊಡ್ಡ ಹೊಣೆಯಿದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ ಶೇಕಡ ೬೦ಕ್ಕೂ ಹೆಚ್ಚು ಪೊಲೀಸರು ಹಾಗೂ ಅವರ ಕುಟುಂಬ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಪಾದಯಾತ್ರೆಯಿಂದ ಬಹಳಷ್ಟು ತೊಂದರೆಯಾಗಿದೆ. ಆದ್ರೆ ಡಿ.ಕೆ.ಶಿವಕುಮಾರ್ ಮಾತ್ರ ಸರ್ಕಾರ ಸುಳ್ಳು ಲೆಕ್ಕ ಕೊಡ್ತಾಯಿದೆ ಎನ್ನುತ್ತಿದ್ದಾರೆ ಎಂದು, ಗೃಹಸಚಿವರು ಆಕ್ರೋಶ ವ್ಯಕ್ತಪಡಿಸಿದರು.