ಶಿವಮೊಗ್ಗ : ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದಲ್ಲಿ 24 ವರ್ಷಗಳಿಗೊಮ್ಮೆ ನಡೆಯುವ ಶ್ರೀ ಹಿರಿಮಾವುರದಮ್ಮ ದೇವಿಯ ಸಿಡಿ ಜಾತ್ರಾ ಮಹೋತವ ಈ ಬಾರಿ ನಡೆಯಲಿದೆ. ಜೂನ್ ೮ರಂದು ಏಳು ಗ್ರಾಮಗಳ ಶಕ್ತಿ ದೇವತೆಗಳ ಜಾತ್ರ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವಿಶೇಷ ಆಹ್ವಾನಿತರಾಗಿ ಪ್ರಮುಖ ರಾಜಕೀಯ ಮುಖಂಡರನ್ನು ಜಾತ್ರೆಗೆ ಆಹ್ವಾನಿಸಲಾಗಿದೆ. ಜೂನ್ ೮ರ ಮಧ್ಯಾಹ್ನ ೨ ಗಂಟೆಗೆ ಸಿಡಿ ಉತ್ಸವ ನಡೆಯಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೇಕೆಂದು ಗ್ರಾಮಸ್ಥರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.